My spirit about Steve Jobs
ಸತ್ತೆನೆಂದೆನಬೇಡ, ಸೋತೆನೆಂದೆನಬೇಡ
ಬತ್ತಿತೆನ್ನೊಳು ಸತ್ವದೂಟೆ ಎನಬೇಡ
ಮೃತ್ಯುವೆನ್ನುವುದೊಂದು ತೆರೆ ಇಳಿತ..!
ತೆರೆ ಏರು, ಮತ್ತೆ ತೋರ್ಪುದು ನಾಳೆ ಮಂಕುತಿಮ್ಮ
ಇಂದು ನಾನು ನಿಮಗೆ steve jobs ಜೀವನದ ಮೂರು ಕಥೆಗಳನ್ನು ಹೇಳಲು ಬಯಸುತ್ತೇನೆ. ಅವುಗಳಲ್ಲಿ ವಿಶೇಷವೇನಿಲ್ಲ. ಬರೀ ಮೂರು ಕಥೆಗಳಷ್ಟೆ...."
ಅಂದು ಆತ ಹೇಳಿದ ಮೊದಲ ಕಥೆ ಆತನ ದತ್ತು ಸ್ವೀಕಾರ ಹಾಗೂ ಕಾಲೇಜಿಗೆ ತಿಲಾಂಜಲಿ ಇತ್ತ ಘಟನೆಯ ಬಗ್ಗೆ. ಎರಡನೆಯದ್ದು ತಾನೇ ಪ್ರಾರಂಭಿಸಿದ ಕಂಪನಿಯಿಂದ ತನ್ನನ್ನೇ ಕಿತ್ತೊಗೆದಿದ್ದು ಹಾಗೂ ಅದನ್ನು ಸವಾಲಿನಂತೆ ತೆಗೆದುಕೊಂಡು ಪರಿಸ್ಥಿತಿಯನ್ನು ಎದುರಿಸಿದ ಘಟನೆಗೆ ಸಂಬಂಧಿಸಿದ್ದು. ಮೂರನೆಯದ್ದನ್ನು ಅವರ ಮಾತಿನಲ್ಲೇ ಕೇಳೋಣ.
``ಇದೇ ನಿನ್ನ ಕೊನೆಯ ದಿನ ಎಂಬಂತೆ ನೀನು ಪ್ರತಿದಿನವನ್ನೂ ಕಳೆದರೆ ಒಂದಲ್ಲ ಒಂದು ದಿನ ಅದು ನಿಜವಾಗುತ್ತದೆ ಎಂಬ ಯಾರೋ ಹೇಳಿದ್ದ ಮಾತು 17 ವರ್ಷದವನಾಗಿದ್ದ ನನ್ನ ಮೇಲೆ ತುಂಬಾ ಪ್ರಭಾವ ಬೀರಿತ್ತು. ಆನಂತರ ಪ್ರತಿದಿನವೂ ಬೆಳಗ್ಗೆ ಎದ್ದು ಕನ್ನಡಿಯ ಮುಂದೆ ನಿಂತು, ಇವತ್ತೇ ನನ್ನ ಜೀವಮಾನದ ಕಡೆಯ ದಿನ ಎಂದಾಗಿದ್ದರೆ ಇಂದು ಮಾಡಲು ಹೊರಟಿರುವ ಕೆಲಸವನ್ನು ಮಾಡುತ್ತಿದ್ದೆನೇ? ಎಂದು ನನ್ನನ್ನು ನಾನೇ ಕೇಳಿಕೊಳ್ಳುತ್ತಿದ್ದೆ. ಅಷ್ಟಕ್ಕೂ ಸಾವು ಎದುರಿಗೆ ನಿಂತಿದ್ದಾಗ ಎಲ್ಲವೂ ನಗಣ್ಯವಾಗಿ ಬಿಡುತ್ತದೆ. ಒಂದು ವರ್ಷದ ಹಿಂದೆ ನನಗೆ ಕ್ಯಾನ್ಸರ್ ಬಂದಿರುವುದು ಪತ್ತೆಯಾಯಿತು. ಬೆಳಗ್ಗೆ 7.30ಕ್ಕೆ ವೈದ್ಯಕೀಯ ತಪಾಸಣೆ ನಡೆಯಿತು. ಅದರಲ್ಲಿ ಕ್ಯಾನ್ಸರ್ ಗಡ್ಡೆ ಇರುವುದು ಸ್ಪಷ್ಟವಾಗಿ ಗೋಚರಿಸಿತು. ಅದು ವಾಸಿಯಾಗದ ವಿಧದ ಕ್ಯಾನ್ಸರ್ ಆಗಿತ್ತು. ಆರು ತಿಂಗಳಿಗಿಂತ ಹೆಚ್ಚು ಕಾಲ ನಾನು ಬದುಕುವುದಿಲ್ಲ ಎಂದು ವೈದ್ಯರು ಹೇಳಿಯೂ ಬಿಟ್ಟರು. ಮನೆಗೆ ಹೋಗಿ ಬಾಕಿ ಉಳಿದಿರುವ ಕೆಲಸಗಳನ್ನು ಮುಗಿಸಿಬಿಡು ಎಂದ ಸಲಹೆ ನೀಡಿದರು. ವೈದ್ಯರು ನಮ್ಮನ್ನು ಸಾವಿಗೆ ಅಣಿಗೊಳಿಸುವುದೇ ಹಾಗೆ. ಅಂದರೆ ನಿನ್ನ ಹೆಂಡತಿ, ಮಕ್ಕಳ ಜತೆ ಏನೇನು ಮಾತನಾಡಿಕೊಳ್ಳಬೇಕು ಅದನ್ನೆಲ್ಲ ಮಾತಾಡಿ ಮುಗಿಸು, ಅವರ ಭವಿಷ್ಯಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡು, ನೀನು ಸತ್ತ ನಂತರವೂ ಅವರು ಖುಷಿಯಿಂದ ಇರಲು ಬೇಕಾದ ಮುಂಜಾಗ್ರತೆಗಳನ್ನು ತೆಗೆದುಕೋ ಅಂತ. ಆದರೆ ಕ್ಯಾನ್ಸರ್ ಬಂದಿರುವ ವಿಚಾರ ನನ್ನನ್ನು ಸಂಪೂರ್ಣವಾಗಿ ಆವರಿಸಿತ್ತು. ಅದೇ ದಿನ ಸಂಜೆ ವೇಳೆಗೆ ಬಯಾಪ್ಸಿ ಮಾಡಿದರು. ಸೂಜಿ ಹಾಕಿ ಕ್ಯಾನ್ಸರ್ ಗಡ್ಡೆಯ ಕೆಲವು ಸೆಲ್‌ಗಳನ್ನು ಹೊರತೆಗೆದು, ಪರೀಕ್ಷಿಸಿದರು. ಅದೃಷ್ಟವಶಾತ್, ಅದು ಶಸ್ತ್ರಚಿಕಿತ್ಸೆಯ ಮೂಲಕ ಗುಣಪಡಿಸಬಹುದಾದ ಕ್ಯಾನ್ಸರ್ ಆಗಿತ್ತು! ಅಂದು ನಾನು ಸಾವನ್ನು ಮುಟ್ಟಿನೋಡಿ ಬಂದಿದ್ದೆ!
ಅಂತಹ ಅನುಭವದ ಬಲದಿಂದ ಹೇಳುವುದಾದರೆ ಸಾವು ಕೂಡ ಒಂದು ಉಪಯುಕ್ತ ಅನುಭವ. ಆದರೆ ಅದು ಬುದ್ಧಿಗೆ ಮಾತ್ರ ನಿಲುಕುವಂಥದ್ದು. ಅಷ್ಟಕ್ಕೂ ಯಾರೂ ಸಾಯಲು ಬಯಸುವುದಿಲ್ಲ. ಸ್ವರ್ಗಕ್ಕೆ ಹೋಗಬೇಕು ಎಂದು ಬಯಸುವವರೂ ಸಾಯಲು ಇಷ್ಟಪಡುವುದಿಲ್ಲ. ಆದರೆ ನಾವೆಲ್ಲ ಸೇರುವ ಅಂತಿಮ ತಾಣ ಸಾವು. ಇದುವರೆಗೂ ಸಾವಿನಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಾಗಿಲ್ಲ. ಅದು ಹಾಗೆಯೇ ಇರಬೇಕು. Death is very likely the single best invention of Life! ಜೀವನದಲ್ಲಿ ಸಾವು ಬದಲಾವಣೆಯ ಏಜೆಂಟ್. ಹಳಬರನ್ನು ಜಾಗ ಖಾಲಿ ಮಾಡಿಸಿ, ಹೊಸಬರಿಗೆ ಅವಕಾಶ ಮಾಡಿಕೊಡುತ್ತದೆ. ಇವತ್ತು ನೀವು ಹೊಸಬರು. ಆದರೆ ಮುಂದೊಂದು ದಿನ ನೀವು ಕೂಡ ಹಳಬರಾಗಿ ಜಾಗ ಖಾಲಿ ಮಾಡಬೇಕಾಗುತ್ತದೆ! ನಿಮಗಿರುವ ಅವಧಿ ತೀರಾ ಕ್ಷಣಿಕ. ಬೇರೆಯವರಿಗಾಗಿ ನಿಮ್ಮ ಬದುಕನ್ನು ಸವೆಸಿ ಆ ಸಮಯವನ್ನು ವ್ಯರ್ಥ ಮಾಡಬೇಡಿ. ಯಾವುದೋ ಸಿದ್ಧಾಂತಕ್ಕೆ ಸಿಕ್ಕಿಬಿದ್ದು ಬೇರೊಬ್ಬರ ಚಿಂತನೆಗಳ ಬಗ್ಗೆ ಚಿಂತೆ ಮಾಡುತ್ತಾ ಚಿತೆ ಏರಬೇಡಿ. ಇತರರ ಗದ್ದಲ ನಿಮ್ಮ ಅಂತರಾತ್ಮದ ಧ್ವನಿಯನ್ನು ಹೊಸಕಿಹಾಕಲು ಬಿಡಬೇಡಿ. ನಿಮ್ಮ ಮನಸ್ಸು ಮತ್ತು ಅಂತಃಧ್ವನಿಯನ್ನು ಹಿಂಬಾಲಿಸಿ. ನೀವೇನಾಗಬೇಕು ಎಂಬುದು ನಿಮ್ಮ ಅಂತರಾತ್ಮಕ್ಕೆ ಚೆನ್ನಾಗಿ ಗೊತ್ತಿರುತ್ತದೆ. ನಾನು ಪ್ರಾಪ್ತವಯಸ್ಕನಾಗಿದ್ದಾಗ "The Whole Earth Catalog'' ಎಂಬ ಅದ್ಭುತ ಪುಸ್ತಕವೊಂದಿತ್ತು. ನನ್ನ ತಲೆಮಾರಿನವರ ಬೈಬಲ್ ಅದಾಗಿತ್ತು. ಆದರೆ ಕಾಲಾಂತರದಲ್ಲಿ ಅದು ಕಾಲಗರ್ಭದಲ್ಲಿ ಸೇರುವ ಸಮಯ ಬಂತು. 1970ರ ದಶಕದ ಮಧ್ಯ ಭಾಗದಲ್ಲಿ "The Whole Earth Catalog''ನ ಕೊನೆಯ ಪ್ರಕಟಣೆ ಹೊರಬಿತ್ತು. ಅದರ ಹಿಂಬದಿಯ ಪುಟದ ಮೇಲೆ ಹಳ್ಳಿಯ ರಸ್ತೆಯೊಂದರ ಮುಂಜಾವಿನ ಫೋಟೊ ಇತ್ತು. ಅದರ ಮೇಲೆ ವಿದಾಯದ ಒಕ್ಕಣೆಯೊಂದಿತ್ತು- Stay Hungry, Stay Foolish! ನಾನು ನಿಮಗೆ ಹಾರೈಸುವುದೂ ಅದನ್ನೇ - Stay Hungry, Stay Foolish! ಮನದ ತುಂಬ ಕಲಿಕೆಯ ಹಸಿವಿರಲಿ, ಮನದಾಸೆಯಂತೆ ನಡೆದುಕೊಳ್ಳಿರಿ".
ಜಾಬ್ಸ್ ಭಾಷಣದಲ್ಲಿ ನಮಗೂ ಒಂದು ಕಿವಿಮಾತಿದೆ. ಕಾಲೇಜು ಓದದ ಜಾಬ್ಸ್ ಇಷ್ಟೆಲ್ಲಾ ಮಾಡಬಹುದಾಗಿದ್ದರೆ ಮಾರ್ಕ್ಸ್ ಕಡಿಮೆ ಬಂತು, ಫೇಲಾಯಿತು ಅಂತ ನೇಣುಹಾಕಿಕೊಳ್ಳುವ ನಾವೇಕೆ ಜೀವನವನ್ನು ಸಕಾರಾತ್ಮಕವಾಗಿ ನೋಡಬಾರದು? ಸೋಲನ್ನೇಕೆ ಸವಾಲಾಗಿ ಸ್ವೀಕರಿಸಬಾರದು? ಜಾಬ್ಸ್‌ನಂತೆ ಸಾವಿರಾರು ಜನರಿಗೆ ಉದ್ಯೋಗ ನೀಡಿ ಅವರ ಬದುಕನ್ನು ಬದಲಾಯಿಸಲಾಗದಿದ್ದರೂ ಕನಿಷ್ಠ ನಮ್ಮ ಬದುಕು ಮತ್ತು ಭವಿಷ್ಯವನ್ನಾದರೂ ಹಸನಾಗಿಸಿಕೊಳ್ಳಬಹುದಲ್ಲವೆ? ಆದರೆ ಅದಕ್ಕೆ ಕಲಿಯುವ ಹಸಿವು, ಏನಾದರೂ ಮಾಡಬೇಕೆಂಬ ಹಂಬಲ, ಯಾರನ್ನೂ ಲೆಕ್ಕಿಸದೆ ತೋಚಿದ್ದನ್ನು ಸಾಧಿಸುವ ಎದೆಗಾರಿಕೆ ಬೇಕು. ಅದಕ್ಕೇ ಜಾಬ್ಸ್ ಹೇಳಿದ್ದು Stay Hungry, Stay Foolish!

Comments
Post a Comment