Posts

Showing posts from 2017
Image
My spirit about Steve Jobs ಸತ್ತೆನೆಂದೆನಬೇಡ, ಸೋತೆನೆಂದೆನಬೇಡ ಬತ್ತಿತೆನ್ನೊಳು ಸತ್ವದೂಟೆ ಎನಬೇಡ ಮೃತ್ಯುವೆನ್ನುವುದೊಂದು ತೆರೆ ಇಳಿತ..! ತೆರೆ ಏರು, ಮತ್ತೆ ತೋರ್ಪುದು ನಾಳೆ ಮಂಕುತಿಮ್ಮ             ಇಂದು ನಾನು ನಿಮಗೆ steve jobs ಜೀವನದ ಮೂರು ಕಥೆಗಳನ್ನು ಹೇಳಲು ಬಯಸುತ್ತೇನೆ. ಅವುಗಳಲ್ಲಿ ವಿಶೇಷವೇನಿಲ್ಲ. ಬರೀ ಮೂರು ಕಥೆಗಳಷ್ಟೆ...." ಅಂದು ಆತ ಹೇಳಿದ ಮೊದಲ ಕಥೆ ಆತನ ದತ್ತು ಸ್ವೀಕಾರ ಹಾಗೂ ಕಾಲೇಜಿಗೆ ತಿಲಾಂಜಲಿ ಇತ್ತ ಘಟನೆಯ ಬಗ್ಗೆ. ಎರಡನೆಯದ್ದು ತಾನೇ ಪ್ರಾರಂಭಿಸಿದ ಕಂಪನಿಯಿಂದ ತನ್ನನ್ನೇ ಕಿತ್ತೊಗೆದಿದ್ದು ಹಾಗೂ ಅದನ್ನು ಸವಾಲಿನಂತೆ ತೆಗೆದುಕೊಂಡು ಪರಿಸ್ಥಿತಿಯನ್ನು ಎದುರಿಸಿದ ಘಟನೆಗೆ ಸಂಬಂಧಿಸಿದ್ದು. ಮೂರನೆಯದ್ದನ್ನು ಅವರ ಮಾತಿನಲ್ಲೇ ಕೇಳೋಣ. ``ಇದೇ ನಿನ್ನ ಕೊನೆಯ ದಿನ ಎಂಬಂತೆ ನೀನು ಪ್ರತಿದಿನವನ್ನೂ ಕಳೆದರೆ ಒಂದಲ್ಲ ಒಂದು ದಿನ ಅದು ನಿಜವಾಗುತ್ತದೆ ಎಂಬ ಯಾರೋ ಹೇಳಿದ್ದ ಮಾತು 17 ವರ್ಷದವನಾಗಿದ್ದ ನನ್ನ ಮೇಲೆ ತುಂಬಾ ಪ್ರಭಾವ ಬೀರಿತ್ತು. ಆನಂತರ ಪ್ರತಿದಿನವೂ ಬೆಳಗ್ಗೆ ಎದ್ದು ಕನ್ನಡಿಯ ಮುಂದೆ ನಿಂತು, ಇವತ್ತೇ ನನ್ನ ಜೀವಮಾನದ ಕಡೆಯ ದಿನ ಎಂದಾಗಿದ್ದರೆ ಇಂದು ಮಾಡಲು ಹೊರಟಿರುವ ಕೆಲಸವನ್ನು ಮಾಡುತ್ತಿದ್ದೆನೇ? ಎಂದು ನನ್ನನ್ನು ನಾನೇ ಕೇಳಿಕೊಳ್ಳುತ್ತಿದ್ದೆ. ಅಷ್ಟಕ್ಕೂ ಸಾವು ಎದುರಿಗೆ ನಿಂತಿದ್ದಾಗ ಎಲ್ಲವೂ ನಗಣ್ಯವಾಗಿ ಬಿಡುತ್ತದೆ. ಒಂದು ವರ್ಷದ ಹಿಂದೆ ನನಗೆ ಕ್ಯಾನ್ಸರ್ ಬಂದಿರುವ