Posts

Showing posts from June, 2020

Learn How To Answer Each Question

  How Your Question Paper Tests You  K.U.A.S (Knowledge- ಜ್ಞಾನ, Understanding- ತಿಳಿವಳಿಕೆ, Apply/Application –ಪ್ರಯೋಗ/ಬಳಕೆ, Skill- ಕೌಶಲ) ಆಧಾರದಲ್ಲಿರುತ್ತವೆ.  1) ಜ್ಞಾನ ಆಧಾರಿತ ಒಂದು ಅಂಕದ ಪ್ರಶ್ನೆಗಳು, ವಿದ್ಯಾರ್ಥಿಗಳು ಎಷ್ಟು ಓದಿದ್ದಾರೆ ಎಂಬುದನ್ನು ಅರಿಯಲು ಕೇಳಲಾಗುತ್ತದೆ. 2) ಎರಡು ಅಂಕದ ಪ್ರಶ್ನೆಗಳು  K+U ಆಧಾರಿತ. ಎಷ್ಟು ಓದಿರುವಿರಿ ಹಾಗೂ ತಿಳಿದಿರುವಿರಿ ಎಂಬುದನ್ನು ಅರಿಯಲು ಕೇಳಲಾಗುತ್ತದೆ. 3) ಮೂರು ಅಂಕದ ಪ್ರಶ್ನೆಗಳು K+U+A ಆಧಾರಿತ. ಜ್ಞಾನ, ವಿಷಯದ ಆಳ ಹಾಗೂ ಅದನ್ನು ಪ್ರಯೋಗಿಸುವುದನ್ನು ಅವಲಂಬಿಸಿರುತ್ತದೆ. 4) ನಾಲ್ಕು ಹಾಗೂ ಅದಕ್ಕೂ ಹೆಚ್ಚಿನ ಅಂಕಗಳು K+U+A+S ಆಧಾರಿತ. ಇಲ್ಲಿ ಹೆಚ್ಚುವರಿಯಾಗಿ ಕೌಶಲ ಬರುತ್ತದೆ. ಓದಿದ್ದನ್ನು, ಅರಿತಿದ್ದನ್ನು ಎಷ್ಟು ಚೆನ್ನಾಗಿ ಪ್ರಯೋಗಿಸಬಲ್ಲಿರಿ, ವಿವರಿಸಬಲ್ಲಿರಿ ಎಂಬುದನ್ನು ಆಧರಿಸಿರುತ್ತದೆ. ನಾಲ್ಕನೇ ಅಂಶ ಬಹಳ ಮುಖ್ಯ. ‘ಕೌಶಲ’ ಗುಣ ಬೆಳೆಸಿಕೊಳ್ಳಲು ನೋಡುವುದು, ಜೋರಾಗಿ ಓದುವುದು, ಚರ್ಚಿಸುವುದು ಹಾಗೂ ಅದನ್ನು ಬರೆದು ಅಭ್ಯಾಸ ಮಾಡಬೇಕು. ಇದರಿಂದ ಪರಿಣತಿ ಸಾಧಿಸಬಹುದು